egypt
AR
belarus
BE
bulgaria
BG
bangladesh
BN
bosnia
BS
spain
CA
czech_republic
CS
germany
DE
greece
EL
usa
EM
great_britain
EN
esperanto
EO
spain
ES
estonia
ET
iran
FA
finnland
FI
france
FR
israel
HE
croatia
HR
hungary
HU
indonesia
ID
italy
IT
japan
JA
georgia
KA
india
KN
south_korea
KO
lithuania
LT
latvia
LV
india
MR
netherlands
NL
norway
NN
india
PA
poland
PL
portugal
PT
brazil
PX
romania
RO
russia
RU
slovakia
SK
serbia
SR
sweden
SV
ukraine
UK
vietnam
VI
china
ZH

ಭಾಷೆ ಮತ್ತು ಜಾಹಿರಾತು.

ಜಾಹಿರಾತು ಸಂಪರ್ಕದ ಒಂದು ವಿಶೇಷ ರೂಪದ ನಿರೂಪಣೆ. ಅದುಉತ್ಪಾದಕರ ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಬೇರೆ ಎಲ್ಲಾ ತರಹದ ಸಂಚರಣೆಗಳಂತೆಯೆ ಇದಕ್ಕೂ ದೀರ್ಘವಾದ ಚರಿತ್ರೆ ಇದೆ. ಪ್ರಾಚೀನದಲ್ಲಿ ರಾಜಕಾರಣಿಗಳು ಹಾಗೂ ಮದ್ಯದಂಗಡಿಯವರು ಪ್ರಚಾರ ಮಾಡುತ್ತಿದ್ದರು. ಜಾಹಿರಾತಿನ ಭಾಷೆ ಭಾಷಣದ ಕಲೆಯ ವಿಶಿಷ್ಟ ಗುಣಗಳನ್ನು ಉಪಯೋಗಿಸುತ್ತವೆ. ಏಕೆಂದರೆ ಅದಕ್ಕೆ ಒಂದು ಗುರಿ ಇದೆ, ಅಂದರೆ ಅದು ಒಂದು ಯೋಜಿತ ಸಂವಹನೆ. ನಾವು ಎಚ್ಚರವಾಗಬೇಕು ಹಾಗೂ ನಮ್ಮ ಉತ್ಸುಕತೆಯನ್ನು ಪ್ರಚೋದಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ನಮಗೆ ಒಂದು ಉತ್ಪಾದನೆಯ ಮೇಲೆ ಆಸಕ್ತಿ ಮೂಡಿ ಅದನ್ನು ಕೊಳ್ಳಬೇಕು. ಈ ಕಾರಣಕ್ಕಾಗಿ ಜಾಹಿರಾತಿನ ಭಾಷೆ ಬಹು ಪಾಲು ಅತ್ಯಂತ ಸರಳವಾಗಿರುತ್ತದೆ. ಹಲವೇ ಪದಗಳನ್ನು ಹಾಗೂ ಸರಳ ಘೋಷಣೆಗಳನ್ನು ಬಳಸಲಾಗುತ್ತದೆ. ಇದರ ಮೂಲಕ ನಮ್ಮ ಮಿದುಳು ಜಾಹಿರಾತಿನ ಅಂತರ್ಯವನ್ನು ಚೆನ್ನಾಗಿ ಗ್ರಹಿಸಬೇಕು. ಹಲವು ವ್ಯಾಕರಣಾಂಶಗಳನ್ನು,ಉದಾಹರಣೆಗೆ ಗುಣ-,ಅತಿಶಯೋಕ್ತಿ ಪದಗಳನ್ನು ಹೆಚ್ಚಾಗಿ ಬಳಸಲಾಗುವುದು. ಅವು ಉತ್ಪನ್ನಗಳು ಬಹಳ ಪ್ರಯೋಜನಕಾರಿ ಎಂದು ಬಣ್ಣಿಸುತ್ತವೆ. ಜಾಹಿರಾತಿನ ಭಾಷೆ ಇದರಿಂದಾಗಿ ಬಹುತೇಕ ಸಕಾರಾತ್ಮಕ ರೂಪ ಹೊಂದಿರುತ್ತದೆ. ಸ್ವಾರಸ್ಯಕರ ಎಂದರೆ,ಜಾಹಿರಾತಿನ ಭಾಷೆ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ಅದರ ಅರ್ಥ, ಜಾಹಿರಾತಿನ ಭಾಷೆ ಒಂದು ಸಮಾಜದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಬಹಳಷ್ಟು ದೇಶಗಳಲ್ಲಿ ಸೌಂದರ್ಯ ಮತ್ತು ಯೌವನ ಎನ್ನುವ ಕಲ್ಪನೆಗಳು ಪ್ರಬಲವಾಗಿರುತ್ತವೆ. ಹಾಗೂ 'ಭವಿಷ್ಯ' ಮತ್ತು 'ಸುಭದ್ರತೆ' ಎಂಬ ಪದಗಳನ್ನು ಹೇರಳವಾಗಿ ಬಳಸಲಾಗುತ್ತದೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಹೆಚ್ಚು ಆಂಗ್ಲ ಪದಗಳನ್ನು ಬಳಸಲಾಗುವುದು. ಇಂಗ್ಲಿಷ್ ಅನ್ನು ಆಧುನಿಕ ಮತ್ತು ಅಂತರರಾಷ್ಟ್ರೀಯ ಎಂದು ಪರಿಗಣಿಸಲಾಗುವುದು. ಮತ್ತು ಅವು ತಾಂತ್ರಿಕ ಉತ್ಪನ್ನಗಳಿಗೆ ಸರಿಯಾಗಿ ಹೊಂದುತ್ತವೆ. ರೊಮಾನಿಕ್ ಭಾಷೆಗಳ ಅಂಶಗಳು ಭೋಗವನ್ನು ಮತ್ತು ಉದ್ವಿಗ್ನತೆಯನ್ನು ಸಾದರಪಡಿಸುತ್ತವೆ. ಅವುಗಳನ್ನು ಆಹಾರಪದಾರ್ಥಗಳಿಗೆ ಮತ್ತು ಪ್ರಸಾಧನಗಳಿಗೆ ಬಳಸಲಾಗುತ್ತದೆ. ಯಾರು ಆಡುಭಾಷೆಯನ್ನು ಬಳಸುತ್ತಾರೊ ಅವರು ತವರು ಮತ್ತು ಸಂಪ್ರದಾಯಕ್ಕೆ ಒತ್ತುಕೊಡುತ್ತದೆ. ಉತ್ಪನ್ನಗಳ ಹೆಸರುಗಳು ಹೊಸ ಪದಗಳು, ಅಂದರೆ ಹೊಸದಾಗಿ ರೂಪಿಸಿದ ಪದಗಳು. ಹೆಚ್ಚಾಗಿ ಇವುಗಳಿಗೆ ಯಾವುದೇ ಅರ್ಥವಿರುವುದಿಲ್ಲ, ಆದರೆ ಕೇಳಲು ಲಯಬದ್ಧವಾಗಿರುತ್ತವೆ. ಹಲವು ಉತ್ಪನ್ನಗಳ ಹೆಸರುಗಳು ಜೀವನೋಪಾಯಗಳಾಗಬಹುದು. ಒಂದು ವ್ಯಾಕ್ಯೂಮ್ ಕ್ಲೀನರ್ ಹೆಸರು ಒಂದು ಕ್ರಿಯಾಪದವಾಗಿ ಪರಿಣಮಿಸಿದೆ: ಹೂವರ್ ಮಾಡುವುದು.

text before next text

© Copyright Goethe Verlag GmbH 2015. All rights reserved.